ಹಝ್ರತ್ ಬಾಬಾ ಫಕ್ರುದ್ದೀನ್ ಔಲಿಯಾ ಅವರ ಸವಿನೆನಪಿನಲ್ಲಿ ಆಚರಿಸಿಕೊಂಡು ಬರುವ ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದಾ ಉರೂಸ್ ಸಮಾರಂಭವು ನವೆಂಬರ್ 21ರಿಂದ 25ರವರೆಗೆ ನಡೆಯಲಿದೆ.

ಕಡೇಶಿವಾಲಯದಿಂದ ಅಜಿಲಮೊಗರು ಸಂಪರ್ಕಿಸುವ ಹಲವು ವರ್ಷಗಳ ಕನಸಿನ ಸೌಹಾರ್ದ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಈ ಬಾರಿ ಸೇತುವೆಯ ಮೇಲೆ ಪಾದಚಾರಿಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಗಡಿಯಾರ ಮೂಲಕ ಕಡೇಶಿವಾಲಯ ಮಾರ್ಗವಾಗಿ ಆಗಮಿಸುವ ಭಕ್ತರು ಸೇತುವೆಯ ಈ ಭಾಗದಲ್ಲಿ ಸ್ವಯಂಸೇವಕರು ಸೂಚಿಸುವ ಸ್ಥಳದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ, ಸೇತುವೆಯ ಮೇಲೆ ನಡೆದುಕೊಂಡು ಉರೂಸ್ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು ಎಂದು ಇಝ್ಝತ್ ಗಾಯ್ಸ್, ಪಟೀಲ ಸ್ವಯಂಸೇವಕರು ಹಾಗೂ ಕಡೇಶಿವಾಲಯ ಕಮಿಟಿ ತಿಳಿಸಿದೆ.



