ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ಕಾಯ್ದೆ ಸೇರಿದಂತೆ ಇತರ ವಿಧೇಯಕಗಳು ಅಥವಾ ತಿದ್ದುಪಡಿಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟದಲ್ಲಿ ತೀರ್ಮಾನ ಕೈಗೊಂಡು ವಿಧೇಯಕ ಮಂಡನೆಯಾದ ಬಳಿಕವಷ್ಟೇ ಅದು ಸದನದ ಆಸ್ತಿಯಾಗುತ್ತದೆ. ವಿಧೇಯಕಗಳ ಮಂಡನೆ ಮತ್ತು ಮುಂದಿನ ಪ್ರಕ್ರಿಯೆಗಳು ಸದನದ ವ್ಯಾಪ್ತಿಗೆ ಬಂದರೂ, ಅಂತಿಮವಾಗಿ ಸರ್ಕಾರವೇ ತೀರ್ಮಾನ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಮತಾಂತರ ನಿಷೇಧ ಕಾಯ್ದೆ ಹಾಗೂ ಗೋಹತ್ಯೆ ಕಾಯ್ದೆಗೆ ಸಂಬಂಧಿಸಿದ ಯಾವುದೇ ವಿಧೇಯಕ ಅಥವಾ ತಿದ್ದುಪಡಿಯ ಕುರಿತು ಸದ್ಯ ತಮ್ಮ ಗಮನಕ್ಕೆ ಮಾಹಿತಿ ಬಂದಿಲ್ಲ ಎಂದು ಅವರು ಹೇಳಿದರು.



