ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು ಜಿಲ್ಲಾ ಕೊಂಕಣಿ ಕ್ರೈಸ್ತ ಸಭಾದಿಂದ ಉಮ್ಮಾನ್ ಚಾಂಡಿಗೆ ಶ್ರದ್ಧಾಂಜಲಿ

ವರ್ಕಾಡಿ : ಕೇರಳ ಮಾಜಿ ಮುಖ್ಯಮಂತ್ರಿ ದಿ| ಉಮ್ಮನ್ ಚಾಂಡಿ ಇವರಿಗೆ ಕಾಸರಗೋಡು ಜಿಲ್ಲಾ ಕೊಂಕಣಿ ಕ್ರೈಸ್ತರ ಪರವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವು ವರ್ಕಾಡಿಯಲ್ಲಿ ನಡೆಯಿತು.
ಕಥೊಲಿಕ್ ಸಭಾ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ವಲಯ ಕಥೊಲಿಕ್ ಸಭಾ ಅಧ್ಯಕ್ಷರಾದ ರಾಜು ಜೋನ್ ಡಿ ಸೊಜಾ ವಹಿಸಿದ್ದರು.
ಜಿಲ್ಲೆಯ ಕೊಂಕಣಿ ಕ್ರೈಸ್ತ ಸಮುದಾಯದ ಸರ್ವ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಬಾಗವಹಿಸಿದ ಈ ಕಾರ್ಯಕ್ರಮದಲ್ಲಿ ವರ್ಕಾಡಿ ಇಗರ್ಜಿ ಧರ್ಮ ಗುರುಗಳಾದ ವಂ.ಬೇಸಿಲ್ ವಾಸ್ ರವರು ಮುಖ್ಯ ಅಥಿತಿಯಾಗಿದ್ದರು.


ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವಿನಾ ಮೊಂತೆರೊ, ಕುಂಬ್ಡಾಜೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಎಲಿಜಬೆತ್ ಕ್ರಾಸ್ತಾ, ನ್ಯಾಯವಾದಿ ಎಂ. ಎಸ್.ಥೋಮಸ್, ಡಿ ಸೋಜಾ, ಅಖಿಲ ಭಾರತ ಜನಾದಿಪತ್ಯ ಮಹಿಲಾ ಅಸೋಸಿಯೇಷನ್ ನ ಮಂಜೇಶ್ವರ ಏರಿಯ ಅಧ್ಯಕ್ಷೆ ಶ್ರೀಮತಿ ಐರಿನ್ ಜೊಸ್ಪಿನ್ , ಕುಂಬಳೆ ಬ್ಲಾಕ್ ಕಾಂಗ್ರೆಸ್‌ ಸೆಕ್ರೆಟರಿ ವಿಲ್ಫ್ರೆಡ್ ಡಿಸೊಜಾ, ಮುಂತಾದ ಗಣ್ಯರು ಉಮ್ಮನ್ ಚಾಂಡಿ ಯವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.


ಕಥೊಲಿಕ್ ಸಭಾ ಕೇಂದ್ರೀಯ ಕೋಶಾಧಿಕಾರಿ ಫ್ರಾನ್ಸಿಸ್ ಮೊಂತೇರೊ, ಮಾಜಿ ಅಧ್ಯಕ್ಷರಾದ ರಾಜು ಸ್ಟೀಫನ್ ಕುಂಬ್ಳಾ, ವಿಲ್ ಫ್ರೆಡ್ ಮನೋಹರ್ ಬೆಳಾ, ಕಾರ್ಯದರ್ಶಿ ಜೊಸ್ಸಿ ಬೆಳಾ, ವರ್ಕಾಡಿ ಘಟಕ ಅಧ್ದ್ಯಕ್ಷ ಯೇಸುಪ್ರಸಾದ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಬಿಸಿಯೂಟ ಸಿಬ್ಬಂದಿಯ ಕೈ ತುರಿಮಣೆಯಲ್ಲಿ ಸಿಲುಕಿ ಅವಘಡ; ಸಮಯಪ್ರಜ್ಞೆ ಮೆರೆದ 5ನೇ ತರಗತಿ ಬಾಲಕ

ಮಂಗಳೂರು: ಕೆಪಿಟಿ ಸಿಗ್ನಲ್ ಬಳಿ ಭಾರೀ ಗುಂಡಿ; ಅಪಾಯದಂಚಿನಲ್ಲಿ ವಾಹನ ಸವಾರರು

ಬಂಟ್ವಾಳ: ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ವಿಶೇಷ ತೀರ್ಥಸ್ನಾನ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ

ಬಂಟ್ವಾಳ: ದಕ್ಷಿಣ ಕನ್ನಡದ ತಾಲೂಕು ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ

ಬಂಟ್ವಾಳ: ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ

ಮೂಡಬಿದ್ರೆ: ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಸುಟ್ಟ ಗಾಯ…!

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಸಹೋದರನೂ ಶವವಾಗಿ ಪತ್ತೆ; ಮಂಗಳೂರಿನ ಲಾಡ್ಜ್‌ನಲ್ಲಿ ದುರಂತ

ಕೊಲಂಬಿಯಾ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ; 111 ಮಂದಿ ಸಾವು

error: Content is protected !!