ಜನ ಮನದ ನಾಡಿ ಮಿಡಿತ

Advertisement

ಕಿನ್ನಿಗೋಳಿ – ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಗೆ ಕಾರು ಡಿಕ್ಕಿ: ಓರ್ವ ಮೃತ್ಯು


ಮೂಡುಬಿದಿರೆ: ಕಿನ್ನಿಗೋಳಿ – ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೂರುಕಾವೇರಿಯಲ್ಲಿ ಟಿಪ್ಪರ್‌ಗೆ ಕಾರು ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಆರು ಮಂದಿಯಲ್ಲಿ ಓರ್ವರು ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ. ಬೆಳುವಾಯಿ ನಿವಾಸಿ ರಾಮಣ್ಣ (49) ಮೃತರು. ಕಾರಿನಲ್ಲಿ ರಾಮಣ್ಣ ಅವರ ಜತೆ ವಸಂತ, ಪ್ರವೀಣ್, ದಿನೇಶ್, ಆನಂದ, ಸಂಜೀವ ಅವರು ಇದ್ದರು. ಕಾರಿನಲ್ಲಿದ್ದವರ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಐಕಳ ಕಡೆಯಿಂದ ಮೂಲ್ಕಿ ಕಡೆ ಸಂಚರಿಸುತ್ತಿದ್ದ ಟಿಪ್ಪರ್‌ಗೆ, ಮೂಲ್ಕಿಯಿಂದ ಬೆಳುವಾಯಿ ಕಡೆಗೆ ಸಂಚರಿಸುತ್ತಿದ್ದ ಕಾರು ಮೂರುಕಾವೇರಿ ಸಮೀಪದಲ್ಲಿ ಢಿಕ್ಕಿ ಹೊಡೆದಿತ್ತು. ಕಾರು ಸಂಚರಿಸುವ ಸಂದರ್ಭ ರಸ್ತೆಯ ಅಂಚಿನಿಂದ ಕೆಳಗೆ ಇಳಿದಿದ್ದು, ಅಂಚಿನಿಂದ ಮೇಲೆ ಬರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ, ಮುಂಭಾಗದಿಂದ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಕಾರು ಸಂಪೂರ್ಣವಾಗಿ ಬಲ ಬದಿಗೆ ಸರಿದಿದ್ದು, ಅಪಘಾತ ತಪ್ಪಿಸಲು ಟಿಪ್ಪರ್ ಎಡಭಾಗಕ್ಕೆ ಸಂಚರಿಸಿದರೂ ಅಪಘಾತ ತಡೆಯಲು ಸಾಧ್ಯವಾಗಿಲ್ಲ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರಿಗೂ ಹಾನಿಯಾಗಿದೆ. ಮೃತ ರಾಮಣ್ಣಮತ್ತು ಐವರು ಮೂಲ್ಕಿ ಕಾರ್ನಾಡಿನಲ್ಲಿ ಕೆಲಸ ಮುಗಿಸಿ ಸಂಜೆ ತಮ್ಮ ಮನೆ ಬೆಳವಾಯಿಗೆ ವಾಪಸಾಗುವ ಸಂದರ್ಭ ಅಪಘಾತ ಸಂಭವಿಸಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಿಸಿಯೂಟ ಸಿಬ್ಬಂದಿಯ ಕೈ ತುರಿಮಣೆಯಲ್ಲಿ ಸಿಲುಕಿ ಅವಘಡ; ಸಮಯಪ್ರಜ್ಞೆ ಮೆರೆದ 5ನೇ ತರಗತಿ ಬಾಲಕ

ಮಂಗಳೂರು: ಕೆಪಿಟಿ ಸಿಗ್ನಲ್ ಬಳಿ ಭಾರೀ ಗುಂಡಿ; ಅಪಾಯದಂಚಿನಲ್ಲಿ ವಾಹನ ಸವಾರರು

ಬಂಟ್ವಾಳ: ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ವಿಶೇಷ ತೀರ್ಥಸ್ನಾನ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ

ಬಂಟ್ವಾಳ: ದಕ್ಷಿಣ ಕನ್ನಡದ ತಾಲೂಕು ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ

ಬಂಟ್ವಾಳ: ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ

ಮೂಡಬಿದ್ರೆ: ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಸುಟ್ಟ ಗಾಯ…!

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಸಹೋದರನೂ ಶವವಾಗಿ ಪತ್ತೆ; ಮಂಗಳೂರಿನ ಲಾಡ್ಜ್‌ನಲ್ಲಿ ದುರಂತ

ಕೊಲಂಬಿಯಾ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ; 111 ಮಂದಿ ಸಾವು

error: Content is protected !!