ಜನ ಮನದ ನಾಡಿ ಮಿಡಿತ

Advertisement

ಎಣ್ಮಕಜೆ ಗ್ರಾಪಂ ನ ಸ್ವಾತಂತ್ರ್ಯ ದಿನಾಚರಣೆಗೆ ಸಾಧಕರಿಗೆ ಸನ್ಮಾನ- ಪ್ರತಿಭಾ ಸಂಗಮ ಸಂಗೀತ ಸೌರಭ ಕಾರ್ಯಕ್ರಮ

ಪೆರ್ಲ: ಎಣ್ಮಕಜೆ ಗ್ರಾ.ಪಂ.ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಧಕರಿಗೆ ಸನ್ಮಾನ, ಎಪ್ಲಸ್ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇಶ ಭಕ್ತಿ ಗೀತೆಗಳ ಸಂಗೀತ ಸೌರಭ ಕಾರ್ಯಕ್ರಮದೊಂದಿಗೆ ವೈವಿಧ್ಯಮಯವಾಗಿ ಆಚರಿಸಲಾಯಿತು. ಬಜಕೂಡ್ಲು ಸಮೀಪದ ಕಾನ ಎಂಬಲ್ಲಿರುವ ಸಾಂತ್ವನ ವಿಶೇಷ ಬಡ್ಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು.


ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್,ಬ್ಲೋಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಸೌದಾಭಿ ಹನೀಫ್, ಜಯಶ್ರೀ ಕುಲಾಲ್, ಹಾಗೂ ಪಂಚಾಯತು ಸದಸ್ಯರಾದ ಮಹೇಶ್ ಭಟ್, ಶಶಿಧರ, ನರಸಿಂಹ ಪೂಜಾರಿ,ರಾಮಚಂದ್ರ, ಕುಸುಮಾವತಿ, ಉಷಾ, ಝರಿನಾ ಮುಸ್ತಾಫ,ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಹಾಗೂ ಪಂ.ಉದ್ಯೋಗಿಗಳು,ಪಂ.ಯೋಜನಾ ಸಮಿತಿಯ ಉಪಾಧ್ಯಕ್ಷೆ ಆಯಿಷಾ ಎ.ಎ, ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡರು. ಈ ಸಂದರ್ಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಪ್ಪಯ್ಯ ಮಣಿಯಾಣಿ ಕಾಟುಕುಕ್ಕೆ, ಸದಾಶಿವ ನಾಯ್ಕ್ ಖಂಡಿಗೆ, ಈಶ್ವರ ನಾಯ್ಕ ವಾಣಿನಗರ, ನಿವೃತ್ತ ಪ್ರಾಂಶುಪಾಲ ಬಾಪೂಂಞಿ ಮಾಸ್ತರ್, ಸಾಹಿತಿ ಹರೀಶ್ ಪೆರ್ಲ, ಕಾಷ್ಠ ಶಿಲ್ಪಿ, ನ್ಯಾಯವಾದಿ ಜಿ.ಕೆ.ಭಟ್ ಪೂವಾಳೆ, ಆಯುರ್ವೇದಿಕ್ ಶಿಕ್ಷಣದಲ್ಲಿ ಪ್ರಥಮ ರಾಂಕ್ ಚಿನ್ನದ ಪದಕ ವಿಜೇತೆ ಡಾ.ರಮ್ಯ ದರ್ಬೆ, ಕೃಷಿ ಯಂತ್ರೋಪಕರಣ ಅವಿಷ್ಕಾರಿಸಿದ ಗೋಪಾಲಕೃಷ್ಣ ಶರ್ಮ ಕಾಚಿಕ್ಕಾಡು, ಯುವ ಕವಯಿತ್ರಿ ಸುಜಯ ಸಜಂಗದ್ದೆ, ಕ್ರೀಡಾ ಪಟು ರಾಕೇಶ್ ಕುಮಾರ್ ನಲ್ಕ, ಹಾಗೂ ಎಸ್ಸಸ್ಸೆಲ್ಸಿ, ಪ್ಲಸ್ ಟು ಪರೀಕ್ಷೆಯಲ್ಲಿ ಎ ಪ್ಲಸ್ ಗಳಿಸಿದ ಪಂಚಾಯತು ಮಟ್ಟದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ,ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ತೇರ್ಗಡೆ ದಾಖಲಿಸಿದ ಪೆರ್ಲ ಸತ್ಯನಾರಾಯಣ ಶಾಲೆ, ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ, ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಗೆ ವಿಶೇಷ ಪುರಸ್ಕಾರ ವಿತರಿಸಲಾಯಿತು. ಪ್ರೇಮ್ ಚಂದ್ ಪಿ ಎಸ್ ಸ್ವಾಗತಿಸಿ .ಬಡ್ಸ್ ಶಾಲೆ ಪ್ರಿನ್ಸಿಪಾಲ್‌ ಮರಿಯಾಂಬಿ ವಂದಿಸಿದರು‌.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!