ಜನ ಮನದ ನಾಡಿ ಮಿಡಿತ

Advertisement

ದಲಿತ ವಿರೋಧಿ ಸಚಿವ ಸುಧಾಕರ್ ರಾಜಿನಾಮೆ ಕೊಡಲಿ:ದಿನೇಶ್ ಅಮ್ಟೂರು

ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದಲ್ಲಿರುವ ಸಚಿವ ಡಿ ಸುಧಾಕರ್ ರವರಿಂದ ದಲಿತ ಕುಟುಂಬ ಒಂದು ಪ್ರಾಣಭಯದಿಂದ ಬದುಕುತ್ತಿರುವುದು ಶೋಚನೀಯ ಸ್ಥಿತಿಯಾಗಿದೆ.

ಇದು ಇಡೀ ರಾಜ್ಯದಲ್ಲಿ ಇಂದಿನ ದಲಿತರ ಸ್ಥಿತಿಯ ಚಿತ್ರಣವಾಗಿದೆ. ಡಿ ಸುಧಾಕರ್ ರವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ ಮತ್ತು ಜಾತಿ ನಿಂದನೆ ಪ್ರಕರಣದಡಿ ಎಫ್‌ಐಆರ್ ದಾಖಲಾಗಿದ್ದರೂ ಇದುವರೆಗೂ ಅವರ ರಾಜೀನಾಮೆ ಪಡೆಯದೆ ಇರುವುದು ಸರ್ಕಾರದ ಇಬ್ಬಗೆ ನೀತಿಯನ್ನು ತೋರುತ್ತದೆ, ಮತ್ತು ಈ ಸರ್ಕಾರದಲ್ಲಿ ದಲಿತರ ಪ್ರಾಣಗಳಿಗೆ ಮಾನಗಳಿಗೆ ಬೆಲೆ ಇಲ್ಲವೆಂಬುದು ಖಚಿತವಾಗಿದೆ ಎಂದು ತಾ.ಪಂ.ಮಾಜಿ ಉಪಾಧ್ಯಕ್ಷ ,ಎಸ್ ಸಿ ಮೋರ್ಚಾದ
ರಾಜ್ಯ ಕಾರ್ಯಕಾರಿಣಿ, ಸದಸ್ಯ ದಿನೇಶ್ ಅಮ್ಟೂರು ತಿಳಿಸಿದ್ದಾರೆ.

ಸೆವೆನ್ ಹಿಲ್ಸ್ ಕಂಪನಿಯ ಪಾಲುದಾರರಾದ ಡಿ ಸುಧಾಕರ್ ರವರು ಮೋಸದಿಂದ ಯಲಹಂಕ ಗ್ರಾಮದ ಸುಬ್ಬಮ್ಮ ರವರಿಗೆ ಸೇರಿದ 108/1 ಸರ್ವ ನಂಬರ್ ಜಮೀನನ್ನು ಕಬಳಿಕೆ ಮಾಡಿರುವುದು ಸ್ಪಷ್ಟವಾಗಿ ದಾಖಲೆ ಸಮೇತ ತಿಳಿಯುತ್ತಿದೆ, ಈ ಜಮೀನಿನ ವಿವಾದವು ನ್ಯಾಯಾಲಯದಲ್ಲಿ ಇರುವಾಗಲೇ ಡಿ. ಸುಧಾಕರ್ ರವರು ತಮ್ಮ 40 ಜನ ಪುಡಿ ರೌಡಿಗಳನ್ನು ಕಳಿಸಿ ಆ ದಲಿತ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಅವರ ಮನೆಯನ್ನು ನೆಲಸಮ ಮಾಡಿದ್ದಾರೆ. ಈ ವಿಚಾರವಾಗಿ ವೈರಲ್ ಆದ ವಿಡಿಯೋ ಒಂದರಲ್ಲಿ ನಾನು ಮಚ್ಚುಗಳನ್ನು ಹಿಡಿದು ಆಂಧ್ರಪ್ರದೇಶದಲ್ಲಿ ಓಡಾಡಿರುವ ರೌಡಿ ಎಂದು ಅವರೇ ಹೇಳಿಕೊಂಡಿದ್ದಾರೆ.

ಇಂತಹ ರೌಡಿಗಳಿಗೆ ಸಚಿವ ಸ್ಥಾನ ನೀಡಿದ ಕಾಂಗ್ರೆಸ್ ಸರ್ಕಾರದಿಂದ ನಾವು ಉತ್ತಮ ಅಡಳಿತವನ್ನು ನಿರೀಕ್ಷಿಸಲು ಸಾಧ್ಯವಿಲ್ಲಾ.

ಈ ಪ್ರಕರಣದಲ್ಲಿ ಡಿ. ಸುಧಾಕರ್ ರವರ ರಾಜೀನಾಮೆಯನ್ನು ಶೀಘ್ರವೇ ಪಡೆದು ಅವರನ್ನು ಕಾನೂನಾತ್ಮಕವಾಗಿ ಬಂಧಿಸಬೇಕೆಂಬುದು ನನ್ನ ಆಗ್ರಹವಾಗಿದೆ.

ಕಾಂಗ್ರೆಸ್ ಸರ್ಕಾರದ ಮತ್ತೊಬ್ಬ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಸಾರ್ವಜನಿಕವಾಗಿ ಹೊಲಗೇರಿ ಎಂಬ ಜಾತಿ ನಿಂದಕ ಪದವನ್ನು ಬಳಸಿ ಸಚಿವ ಸಂಪುಟದಲ್ಲಿ ಉಳಿಯುತ್ತಾರೆ, ಈಗ ಸಚಿವ ಸಂಪುಟದ ಮತ್ತೊಬ್ಬ ಸಚಿವ ಡಿ.ಸುಧಾಕರ್ ದಲಿತರ ಮೇಲೆ ದೌರ್ಜನ್ಯ ಎಸಗಿ ಪ್ರಾಣಬೆದರಿಕೆ ಒಡ್ಡಿ ಸಚಿವ ಸಂಪುಟದಲ್ಲಿ ಉಳಿಯಬಹುದಾದರೆ ಇಂಥ ಸರ್ಕಾರದಿಂದ ದಲಿತರ ರಕ್ಷಣೆ ಸಾಧ್ಯವೇ? ಎಸ್ ಸಿ.ಎಸ್ ,ಟಿ ಹಣವನ್ನು ತನ್ನ ಇಚ್ಚೆ ಬಂದಂತೆ ಬಳಸಿಕೊಳ್ಳುತ್ತಿರುವ ಈ ಸರ್ಕಾರದಿಂದ ಪರಿಶಿಷ್ಟ ಜಾತಿಯವರ ಅಭಿವೃದ್ಧಿ ಸಾಧ್ಯವೇ ? ಇಂತಹ ಆ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರವು ಈ ರಾಜ್ಯಕ್ಕೆ ಬೇಕಾಗಿದೆಯೇ ? ಎಂದು ಅವರು ಪ್ರಶ್ನಿಸಿ ಪತ್ರಿಕಾ ಪ್ರಕಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

error: Content is protected !!