ಜನ ಮನದ ನಾಡಿ ಮಿಡಿತ

Advertisement

ಸಿನಿರಸಿಕರನ್ನು ತನ್ನತ್ತ ಸೆಳೆಯಲು ಸೆ. 22ರಂದು ತೆರೆಗೆ ಅಪ್ಪಳಿಸಲಿದೆ “ಯಾನ್ ಸೂಪರ್ ಸ್ಟಾರ್” ತುಳು ಚಲನಚಿತ್ರ

ಪುತ್ತೂರು; ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ಟಿವಿ ಮಾದ್ಯಮದಲ್ಲಿ ಸಿಐಡಿ

ಧಾರವಾಹಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ಮುಂಬಯಿಯಲ್ಲಿರುವ ಕಾರ್ಕಳ ಮೂಲದ ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ತುಳು ಚಲನ ಚಿತ್ರವು ಸೆ. 22ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಯಾನಂದ ಶೆಟ್ಟಿಯವರು ಮಾತನಾಡಿ ‘ಯಾನ್ ಸೂಪರ್ ಸ್ಟಾರ್’ ಸಿನಿಮಾ ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರ, ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್ ಸಹಿತ ಜಿಲ್ಲೆಯಾದ್ಯಂತ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ. ತುಳು ಸಿನಿಮಾರಂಗಕ್ಕೆ ಯಾನ್ ಸೂಪರ್ ಸ್ಟಾರ್ ಮೂಲಕ ಒಂದು ಸದಭಿರುಚಿಯ ಚಿತ್ರ ಲಭಿಸಲಿದೆ. ಕುಟುಂಬ ಸಮೇತ ಸಿನಿಮಾ ವೀಕ್ಷಿಸ ಬಹುದಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮುಂಬಯಿ, ಪೂನಾ ಮತ್ತಿತರ ಕಡೆಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದ್ದು, ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಬೆಂಗಳೂರು ಮತ್ತು ಗಲ್ಫ್ ದೇಶಗಳಲ್ಲೂ ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ ಎಂದ ಅವರು ಹೊಸ ಜನರೇಶನ್‌ಗೆ ಉತ್ತಮ ಸಂದೇಶ ಕೊಡುವ ಚಿತ್ರವಾಗಿದ್ದು, ಕನ್ನಡ ಮತ್ತು ಹಿಂದಿಯಲ್ಲೂ ಈ ಚಿತ್ರ ತೆರೆಕಾಣಲಿದೆ ಎಂದು ಅವರು ಹೇಳಿದರು.

ಚಿತ್ರದಲ್ಲಿ ಪ್ರಮುಖವಾಗಿ ಜನಮನ್ನಣೆ ಪಡೆದಿರುವ ಸಿಐಡಿ ಧಾರಾವಾಹಿಯ ಮುಂಬಯಿ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಲ್ ರೊಂದಿಗೆ ತುಳುನಾಡಿನ ಖ್ಯಾತ ಕಲಾವಿದರಾದ ಕುಸೇಲ್ದರಸೆ ನವೀನ್ ಡಿ ಪಡೀಲ್, ನವರಸ ರಾಜೆ ಭೋಜರಾಜ ವಾಮಂಜೂರು, ಕಾಂತರ ಚಲನಚಿತ್ರದಲ್ಲಿ ಉತ್ತಮ ಪಾತ್ರ ನಿಭಾಯಿಸಿದ ಮಾನಸಿ ಸುಧೀರ್, ಅನುಷಾ, ಅಶೋಕ್ ಪಕ್ಕಳ, ಮಾಸ್ಟರ್ ಅತಿಶ್ ಶೆಟ್ಟಿ, ಮಾಸ್ಟರ್ ಅರುಷ್ ಯು ಪೂಜಾರಿ, ಕುಮಾರಿ ಶ್ರೀಯಾ ಹೆಗ್ಡೆ ಮೊದಲಾದವರು ತಾರಾಗಣದಲ್ಲಿದ್ದಾರೆ.

ಸಂತೋಷ್ ಶೆಟ್ಟಿಯವರ ಕತೆಗೆ ಸಚಿನ್ ಶೆಟ್ಟಿ ಕುಂಬಳೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆಯನ್ನು ಅಂಕಣ ಜೋಷಿ, ಸಂತೋಷ್ ಶೆಟ್ಟಿ, ಸಾಹಿತ್ಯ ಹಾಡು, ಸಂಗೀತದಲ್ಲಿ ವಿ ಮನೋಹರ್, ಗುರುಕಿರಣ್ ಈ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಹಿನ್ನಲೆ ಸಂಗೀತವನ್ನು ಸಂಜಯ್ ವಾಂದ್ರೇಕರ್, ಕ್ಯಾಮರಾದಲ್ಲಿ ಕೃಷ್ಣರಾಜ್ ಕೋಟ್ಯಾನ್, ಸಾಹಸದಲ್ಲಿ ಆನಂದ ಶೆಟ್ಟಿ, ಸಹ ನಿರ್ದೇಶನ ರಾಮ್ ದಾಸ್ ಸಸಿಹಿತ್ಲು, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಸತೀಶ್ ದುಬೈ, ಕ್ರಿಯೇಟಿವ್ ಡೈರಕ್ಟರ್ ಆಗಿ ಕ್ರಿಸ್ತಬೆಲ್ಲೆ ಡಿ ಸೋಜ, ಪ್ರೊಡಕ್ಷನ್ ಹೆಡ್ಡ್ : ಚಂದ್ರಕಾಂತ್ ಭಂಡಾರಿ, ನಿರ್ದೇಶನವನ್ನು ಸಂತೋಷ್ ಶೆಟ್ಟಿ ಮಾಡಿದ್ದಾರೆ.

ಇನ್ನೂ ಸುದ್ದಿಗೋಷ್ಠಿಯಲ್ಲಿ ಚಿತ್ರ ನಟ ಉದ್ಯಮಿ ಹರೀಶ್ ವಾಸು ಶೆಟ್ಟಿ, ನಿರ್ದೇಶಕ ಸಂತೋಷ್ ಶೆಟ್ಟಿ, ಚಿತ್ರದ ಕ್ಯಾಮರಮ್ಯಾನ್ ಕೃಷ್ಣರಾಜ್ ಕೋಟ್ಯಾನ್, ಚಲನಚಿತ್ರ ಹಂಚಿಕೆದಾರ ಬಾಲಕೃಷ್ಣ ರೈ ಕುಕ್ಕಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಉಡುಪಿ: ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ಮಂಗಳೂರು: ಮಂಗಳೂರಿನಲ್ಲಿ ಆ.13ರಂದು ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಮೊದಲ ಶಾಖೆ ಆರಂಭ

ಮಂಗಳೂರು: ಕದ್ರಿ ಬಂಜನ್‌ ಕ್ಷೇತ್ರದಲ್ಲಿ ನಿವೃತ್ತ ವೀರ ಯೋಧರು, ವೀರನಾರಿಯರಿಗೆ ಸನ್ಮಾನ…!

ಮಂಗಳೂರು: ಡಿಸಿ ಮನ್ನಾ ಭೂಮಿ ಹಂಚಿಕೆಗೆ ಆಗ್ರಹ: ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ…!

ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ಜಖಂ; ಲಕ್ಷಾಂತರ ರೂ. ನಷ್ಟ

ತೊಕ್ಕೊಟ್ಟು: ಬಾರ್ ಬಳಿ ತಲವಾರು ಬೀಸಿ ಆತಂಕ ಸೃಷ್ಟಿಸಿದ ರೌಡಿಶೀಟರ್ ಬಂಧನ…!

ಟೆಹ್ರಾನ್: ಖಮೇನಿ ಭೇಟಿಯಲ್ಲೇ ಹೊಸ ರಹಸ್ಯ! ‘ನೀವೇ ಖಮೇನಿಯೇ?’ ಎಂದು ಪ್ರಶ್ನಿಸಿದ ಇರಾನ್ ಅಧ್ಯಕ್ಷ…!

ಬ್ಯಾಂಕಾಕ್: ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ: ಶಿಕ್ಷಕ ಸಾವು, 15 ಮಂದಿಗೆ ಗಾಯ…!

ಬಂಟ್ವಾಳ: ಆಳ್ವಾಸ್ ಪ್ರಗತಿ-2026 ಉದ್ಯೋಗ ಮೇಳಕ್ಕೆ ಬಂಟ್ವಾಳದಿಂದ ಉಚಿತ ಬಸ್…!

error: Content is protected !!