ಜನ ಮನದ ನಾಡಿ ಮಿಡಿತ

Advertisement

ಮಂಗಳೂರಿನಲ್ಲಿ ವಿದ್ಯುತ್ ಶಾಕ್‌ಗೆ ತಾಯಿ ಮಗ ಬಳಿ…!

ಮಂಗಳೂರು:
ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ತಾಯಿ ಮರ್ಸಿ ಮಸ್ಕರೇನಸ್ (45) ಮತ್ತು ಮಗ ಶೋನ್ ಮಸ್ಕರೇನಸ್ (18) ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಘಟನೆ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆ ಕಾರ್ಮಿಕ ಸುಂದರ ಪೂಜಾರಿ ಸ್ಥಳಕ್ಕೆ ಬಂದಾಗ ದುರಂತ ಗಮನಕ್ಕೆ ಬಂದಿದೆ.

ಮೂಡುಬಿದಿರೆಯ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಶೋನ್ ಸ್ನಾನ ಮಾಡಿ ಬಂದ ಬಳಿಕ ಮನೆಯ ಹೊರಭಾಗದಲ್ಲಿದ್ದ ತಂತಿಗೆ ಒದ್ದೆ ಬಟ್ಟೆಗಳನ್ನು ಒಣಗಿಸಲು ಹಾಕುವ ಸಂದರ್ಭ ವಿದ್ಯುತ್ ಶಾಕ್ ತಗುಲಿರಬಹುದು ಎಂದು ಶಂಕಿಸಲಾಗಿದೆ. ಮಗನನ್ನು ರಕ್ಷಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹೆಂಚಿನ ಮನೆಗೆ ಮರದ ಬದಲಾಗಿ ಕಬ್ಬಿಣದ ಪಕ್ಕಾಸು ಅಳವಡಿಸಲಾಗಿತ್ತು. ವಿದ್ಯುತ್ ಕಂಬದಿಂದ ಕಬ್ಬಿಣದ ಪಕ್ಕಾಸಿಗೆ ನೇರ ಸಂಪರ್ಕ ಕಲ್ಪಿಸಲಾಗಿತ್ತು ಎನ್ನಲಾಗಿದೆ. ವಿದ್ಯುತ್ ತಂತಿಯ ಸಂಪರ್ಕದಿಂದ ಕಬ್ಬಿಣದ ಭಾಗಕ್ಕೆ ವಿದ್ಯುತ್ ಪ್ರವಹಿಸಿ, ಬಟ್ಟೆ ಒಣಗಿಸಲು ಹಾಕುವ ವೇಳೆ ಶೋನ್‌ಗೆ ವಿದ್ಯುತ್ ಶಾಕ್ ತಗುಲಿರಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮರ್ಸಿ ಅವರ ಪತಿ ಸೈಮನ್ ಮಸ್ಕರೇನಸ್ 15 ವಷರ್ಗಳ ಹಿಂದೆ ಮೃತಪಟ್ಟಿದ್ದರು. ತಾಯಿ ಮತ್ತು ಮಗ ಮನೆಯಲ್ಲಿ ವಾಸವಿದ್ದು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

Leave a Reply

Your email address will not be published. Required fields are marked *

ಉಡುಪಿ: ಅ.24ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ

ಸುರತ್ಕಲ್: ಸುರತ್ಕಲ್‌ನಲ್ಲಿ ಶಾಲಾ ಬಸ್‌ಗೆ ಟೂರಿಸ್ಟ್ ಬಸ್ ಢಿಕ್ಕಿ: 13 ವಿದ್ಯಾರ್ಥಿಗಳಿಗೆ ಗಾಯ

ಪುತ್ತೂರು: ಪಡ್ನೂರು ಅಂಗನವಾಡಿಯಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ, ಸಂವಾದ ಕಾರ್ಯಕ್ರಮ

ಮಂಗಳೂರು: ಎಸ್‌ಐಆರ್ ವಿರುದ್ಧ ಮಂಗಳೂರಿನಲ್ಲಿ ‘ಜಂತರ್ ಮಂತರ್’ ಧರಣಿ…!

ಮಂಗಳೂರು: ಸುಲ್ತಾನ್ ಬತ್ತೇರಿಯಲ್ಲಿ ದಾಂಡಿಯಾ ಕಾರ್ಯಕ್ರಮದ ವಿರುದ್ಧ ದೂರು

ಉಡುಪಿ: ಅ. 24ರಂದು ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ

ಉಡುಪಿ: ಅ. 25ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ

ಬಂಟ್ವಾಳ: ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ…!

ಅಕ್ಟೋಬರ್ 24ರಂದು ನಿಟ್ಟೆಯಲ್ಲಿ ‘ಯಕ್ಷಗವಿಷ್ಟಿ’ ಯಕ್ಷಗಾನ ಸ್ಪರ್ಧೆ

error: Content is protected !!