ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಸುಲ್ತಾನ್ ಬತ್ತೇರಿಯಲ್ಲಿ ದಾಂಡಿಯಾ ಕಾರ್ಯಕ್ರಮದ ವಿರುದ್ಧ ದೂರು

ನಗರದ ಸುಲ್ತಾನ್ ಬತ್ತೇರಿಯ ಎಡ್ಜ್ ವಾಟರ್‌ನಲ್ಲಿ ಅಕ್ಟೋಬರ್ 18ರಂದು ನವರಾತ್ರಿ ಪ್ರಯುಕ್ತ ನಡೆದ ದಾಂಡಿಯಾ ಕಾರ್ಯಕ್ರಮದ ವಿರುದ್ಧ ದುರ್ಗಾವಾಹಿನಿ ವತಿಯಿಂದ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಹಾಗೂ ಅಶ್ಲೀಲ ಗಾಯನಕ್ಕೆ ಅವಕಾಶ ನೀಡುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ದುರ್ಗಾವಾಹಿನಿ ಆರೋಪಿಸಿದೆ. ನವರಾತ್ರಿ ಹಬ್ಬದ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದುರ್ಗಾವಾಹಿನಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ. ಆರೋಪಗಳ ಕುರಿತು ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

ಉಡುಪಿ: ಅ.24ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಮೊಬೈಲ್ ರಿಟೇಲರ್ಸ್ ಸಮಾವೇಶ

ಸುರತ್ಕಲ್: ಸುರತ್ಕಲ್‌ನಲ್ಲಿ ಶಾಲಾ ಬಸ್‌ಗೆ ಟೂರಿಸ್ಟ್ ಬಸ್ ಢಿಕ್ಕಿ: 13 ವಿದ್ಯಾರ್ಥಿಗಳಿಗೆ ಗಾಯ

ಪುತ್ತೂರು: ಪಡ್ನೂರು ಅಂಗನವಾಡಿಯಲ್ಲಿ ಗ್ರಾಮ ಸ್ವರಾಜ್ಯ ಅಭಿಯಾನ, ಸಂವಾದ ಕಾರ್ಯಕ್ರಮ

ಮಂಗಳೂರು: ಎಸ್‌ಐಆರ್ ವಿರುದ್ಧ ಮಂಗಳೂರಿನಲ್ಲಿ ‘ಜಂತರ್ ಮಂತರ್’ ಧರಣಿ…!

ಮಂಗಳೂರಿನಲ್ಲಿ ವಿದ್ಯುತ್ ಶಾಕ್‌ಗೆ ತಾಯಿ ಮಗ ಬಳಿ…!

ಉಡುಪಿ: ಅ. 24ರಂದು ಪರಿವಾರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ

ಉಡುಪಿ: ಅ. 25ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ

ಬಂಟ್ವಾಳ: ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ…!

ಅಕ್ಟೋಬರ್ 24ರಂದು ನಿಟ್ಟೆಯಲ್ಲಿ ‘ಯಕ್ಷಗವಿಷ್ಟಿ’ ಯಕ್ಷಗಾನ ಸ್ಪರ್ಧೆ

error: Content is protected !!